ಇಲ್ಲಿ ನಮಗೂ ನಿಮಗೂ ನೋಡೋಕೆ ವ್ಯತ್ಯಾಸವೇನಿಲ್ಲ. ಆಕಾರ ವಿಕಾರ ಗಳು ಬೇರೆಯೇ ಇರಬಹುದು ಆದರೆ,
ಅಂಗಾಂಗಗಳಲ್ಲಿ ಕೆಲವರವು ಮಾತ್ರ ಕೊಂಚ ವ್ಯತ್ಯಾಸವಿರಬಹುದಷ್ಟೆ. ಆದರೆ ನಮ್ಮ ನಿಮ್ಮಲ್ಲಿ ಬದಲಾವಣೆ ಇರುವಂಥದ್ದು ಮಾಡುವ ಯೋಚನೆಯಲ್ಲಿ,
ನೋಡುವ ನೋಟದಲ್ಲಿ ,
ಕಾಣುವ ಕನಸಲ್ಲಿ,
ಕೇಳುವ ರೀತಿಯಲ್ಲಿ ,
ಆಡುವ ಮಾತಿನಲ್ಲಿ.
ನಾವಾಡುವ ಮಾತು ಅರ್ಥವಾಗದವರ ಮುಂದೆ ನಿಂತು ಹೇಳಿದರೆ ಅದು ನ್ಯಾಷನಲ್ ವೇಷ್ಟ್ ಆದಂತೆಯೇ . ಸ್ವಾಮಿ ಅಷ್ಟೇ ಯಾಕ್ರೀ ಒಂದು ಪದ ಕೂಡ ಅರ್ಥ ಆಗ್ದೇ ಇರೋದನ್ನ ಬಳಸಬಾರದು. ಮಾತನಾಡೋಕೆ ಎಲ್ಲರಿಗೂ ಬರುತ್ತೆ ಆದರೆ, ಆ ಮಾತನಾಡುವ ಕಲೆಯಿದಿಯಲ್ಲ ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಇರೋದು.
ಎಲ್ಲಾದಕ್ಕೂ ಒಂದು ರೀತಿ ನೀತಿ ಅನ್ನೋದು ಇದ್ದೆ ಇರುತ್ತೆ, ಇರಲೇ ಬೇಕು ಇಲ್ಲ ಅಂದ್ರೆ ಯಾರ್ ಯಾರ್ ಸ್ಥಾನಗಳು ಯಾರ್ ಅಲಂಕರಿಸಿಬಿಡುತ್ತಾರೋ ಏನೋ ? ನಾವು ಮಾಡುವ ಕೆಲಸ ಇಡಿಯಲ್ಲ ಅದನ್ನ ಒಂದು ನಿಯಮ ಬದ್ಧವಾಗಿ ಮಾಡಿದ್ರೇನೇ ಶ್ರೇಯಷ್ಕರ ಇಲ್ಲವಾದಲ್ಲಿ ಅದು ನಮಗೆ ಬೀಸರ ತರಿಸಿ ಬಿಡುತ್ತದೆ ಯಾವುದಾದರೂ ಅಷ್ಟೇ ಅತಿ ಆಗ್ಬಾರ್ದು. ಅಲ್ಲೇ ಇರೋದು ರಹಸ್ಯ. "ಅತಿಯಾದಲ್ಲಿ ಏನೋ ಸಮಸ್ಯೆ ಖಂಡಿತ ಕಾದು ಕುಳಿತಂತೆಯೇ" ಇವಾಗ ಅದೇನು ಅಂತ ಗೊತ್ತಾಗಲ್ಲ ಅದು ಬಂದಾಗ ಅನುಭವಿಸುವಿರಂತೆ ಇಷ್ಟು ಹೇಳಿ ಲೇಖನ ಮುಗಿಸುತ್ತೇನೆ. ಓದಿರುವ ತಮಗೆ ಧನ್ಯವಾದಗಳು.